ರಘುಪತಿ ಶೃಂಗೇರಿ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಮಾಧ್ಯಮಗಳಲ್ಲಿ ೧೫೦೦೦ ಹೆಚ್ಚು ಕಾರ್ಟೂನ್, ಕ್ಯಾರಿಕೇಚರ್ ರಚಿಸಿದ್ದಾರೆ. ೨೦೧೯ ರಲ್ಲಿ , ಭಾರತದ ನಕ್ಷೆ ಇಸ್ರೊವಿಗೆ " ಇಡೀ ದೇಶ ನಿಮ್ಮೊಂದಿಗೆ ಇದೆ"; ಎಂಬ ಸಂದೇಶ ನೀಡಿದ ಕೃತಿ ಇವರದ್ದು. == ಪರಿಚಯ == ಕನ್ನಡದ ಪತ್ರಿಕೆಗಳಲ್ಲಿ ಕಾರ್ಟೂನ್, ಕ್ಯಾರಿಕೇಚರ್ ರಚಿಸಿರುವ ಕಾರ್ಟೂನ್ ಕ್ಷೇತ್ರದಲ್ಲಿ ಬಹುಮಾನಗಳು, ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ. ಅಷ್ಟಲ್ಲದೆ ಕಾರ್ಟೂನ್ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ, ಕರ್ನಾಟಕ ಕಾರ್ಟೂನಿಸ್ಟ್ ಸಂಘದ ಸಹಕಾರ್ಯದರ್ಶಿಗಳಾಗಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. == ವಿದ್ಯಾಭ್ಯಾಸ == ದಾವಣಗೆರೆಯಲ್ಲಿ ಫ಼ೈನ್ ಆರ್ಟ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಮೊದಲ ಕಾರ್ಟೂನ್ " ವಿಕ್ರಮ" ಎಂಬ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಇದಲ್ಲದೇ ಸುಮಾರು ೨ ವರುಷಗಳ ಕಾಲ ಇವರು ರಚಿಸಿದ ಕಾರ್ಟೊನ್ ಸ್ಟ್ರಿಪ್ ಮಂಗಳ ಪತ್ರಿಕೆಯಲ್ಲಿ ಮೂಡಿತು. == ವೃತ್ತಿ == ಪ್ರಸ್ತುತ ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ == ಕೃತಿಗಳು == ೧. ದೇಶ, ವಿದೇಶದ ಪ್ರಖ್ಯಾತ ನಾಮರ ಕಾರ್ಟೂನ್, ಕ್ಯಾರಿಕೇಚರ್ಗಳು. ೨. ಕಾರ್ಟೂನ್ ಬಗ್ಗೆ ಇವರ ಪುಸ್ತಕಗಳು. ೩. ಕಾರ್ಟೂನ್ ಕ್ಷೇತ್ರವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಲೇಖನಗಳು == ಪ್ರಶಸ್ತಿಗಳು == ರಘುಪತಿಯವರ ಪ್ರಕಟಿತ ಕಾರ್ಟೂನ್ಗಳನ್ನು ಒಳಕೊಂಡ ಪುಸ್ತಕ ೧. ದಕ್ಷಿಣ ಕೊರಿಯಾ, ಜರ್ಮನಿ ಮುಂತಾದ ದೇಶಗಳಲ್ಲಿ, ಆರ್. ಕೆ. ಲಕ್ಷ್ಮಣ್, ಮಾರಿಯೋ ಮಿರಾಂಡ ಮುಂತಾದ ಖ್ಯಾತ ವ್ಯಂಗ್ಯಚಿತ್ರಕಾರರ ಜತೆ ಇವರ ಕೃತಿಗಳು ಪ್ರದಶಿಸಲ್ಪಟ್ಟಿವೆ. ೨. ಅಂತರರಾಷ್ಟ್ರೀಯ ಮಟ್ಟದಲ್ಲಿ ೭, ರಾಷ್ಟ್ರೀಯ ಮಟ್ಟದಲ್ಲಿ ೬ ಹಾಗು ರಾಜ್ಯ ಮಟ್ಟದಲ್ಲಿ ೩ ಪ್ರಶಸ್ತಿಗಳು ಪಡೆದಿರುತ್ತಾರೆ. ೪. ಗೌರೀಶ್ ಅಕ್ಕಿ ಸ್ಟುಡಿಯೊ ಹಾಗೊ ಬೀಬೀಸೀ ಟೀವಿಯಲ್ಲಿ, ಹಲವಾರು ಪತ್ರಿಕೆಗಳಲ್ಲಿ ಇವರ ಸಂದರ್ಶನ ಮಾಡಲಾಗಿದೆ. |ಚಹಾ ಎಲೆಗಳು ಹಾಗು ಬ್ರಶ್ ಬಳಸಿ ತಯಾರಿಸಿದ ಪ್ರಧಾನಿ ಮೋದಿಯವರ ಚಿತ್ರ == ಉಲ್ಲೇಖ ==